Wednesday, January 13, 2010

ನೀಲಾಗಸದ ಕಾರ್ಮೋಡಗಳು ಕರಗಿ
ಧೋ ಎಂದು ಮಳೆ ಸುರಿಯುವಾಗ..
ಚುಮು ಚುಮು ಚಳಿಯಿಂದ ಮೈ ನವಿರಾಗಿ
ನಡುಗುತ್ತಿರುವಾಗ....ಗೆಳೆಯಾ....
ನಿನ್ನ ನೆನಪಾಗಿ ಮೈ ಬಿಸಿಯೇರುತ್ತದೆ......

ಮೈಯ ನರ ನಾಡಿಗಳು ನಿನ್ನ ಬೆಚ್ಚಗಿನ ಆಲಿಂಗನಕ್ಕಾಗಿ,
ಅಧರಾಮೃತವೀಯುವ ಸಿಹಿ ಚುಂಬನಕ್ಕಾಗಿ
ಹಾತೊರೆಯುತ್ತಿರುವಾಗ ನಾನು ಹಿತವಾಗಿ
ನರಳುತ್ತಾ ಕಾಯುತ್ತೇನೆ ....

ನಿನ್ನ ತೋಳಸೆರೆಯಲ್ಲಿ ಹಿಂಡಿಹಿಪ್ಪೆಯಾಗುವ...
ನಿನ್ನೊಡನೆ ಸೇರಿ ಒಂದಾಗುವ....
ನೀನು ಬರಡು ಭೂಮಿಯ ಮೇಲೆ ಮಳೆ ಸುರಿಸುವ ಕ್ಷಣಕ್ಕಾಗಿ
ಮುಂಗಾರು ಮಳೆಗಾಗಿ ಕಾಯುವ ನವಿಲಿನಂತೆ